CAMPUS FRONT OF INDIA - KARNATAKA
662 subscribers
1.06K photos
64 videos
1 file
16 links
Official Telegram channel of Campus Front of India Karnataka
Download Telegram
ಶಿಕ್ಷಣವನ್ನು ವಿಷಮುಕ್ತಗೊಳಿಸಿ- ಹಿಂದುತ್ವ ಪ್ರಾಬಲ್ಯ ತೊಡೆದು ಹಾಕಿ; ಕ್ಯಾಂಪಸ್ ಫ್ರಂಟ್ ನಿಂದ ವಿಚಾರ ಸಂಕಿರಣ

ಚಿಕ್ಕಮಗಳೂರು :- ಶಿಕ್ಷಣವನ್ನು ವಿಷಮುಕ್ತಗೊಳಿಸಿ ಹಾಗೂ ಹಿಂದುತ್ವ ಪ್ರಾಬಲ್ಯ ತೊಡೆದು ಹಾಕಿ , ಎಲ್ಲರನ್ನೊಳಗೊಂಡ ಶಿಕ್ಷಣಕ್ಕಾಗಿ ಕ್ಯಾಂಪಸ್ ಫ್ರಂಟ್ ನಡೆಸುತ್ತಿರುವ ರಾಷ್ಟ್ರೀಯ ಅಭಿಯಾನದ ಭಾಗವಾಗಿ ವಿಚಾರ ಸಂಕಿರಣ ಕಾರ್ಯಕ್ರಮವು ಚಿಕ್ಕಮಗಳೂರಿನಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕ್ಯಾಂಪಸ್ ಫ್ರಂಟ್ ರಾಜ್ಯ ಕೋಶಾಧಿಕಾರಿ ಸವಾದ್ ಕಲ್ಲರ್ಪೆ ಮಾತನಾಡಿ ದೇಶದ ಅಭಿವೃದ್ದಿಗೆ ಪೂರಕವಾಗಿರುವ ಶಿಕ್ಷಣ ವ್ಯವಸ್ಥೆಯು ಇಂದು ಹಿಂದುತ್ವ ಸಿದ್ದಾಂತದ ಹೇರಿಕೆಯ ಮುಖಾಂತರ ವಿಷಮುಕ್ತಗೊಳ್ಳುತ್ತಿದೆ, ರಾಷ್ಟ್ರೀಯ ಶಿಕ್ಷಣ ನೀತಿಯ ಮುಖಾಂತರ ಶಿಕ್ಷಣ ವ್ಯವಸ್ಥೆಯನ್ನು ಕೇಸರೀಕರಣ ನಡೆಸುವ ಮುಖಾಂತರ ಬ್ರಾಹ್ಮಣೀಕರಣದ ಅಜೆಂಡಾದೊಂದಿಗೆ ಬಿಜೆಪಿ-ಆರ್ಎಸ್ಎಸ್ ಕಲುಷಿತಗೊಳಿಸುತ್ತಿದೆ ಇದರ ವಿರುಧ್ದ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿ ಹೋರಾಟಕ್ಕೆ ಸಜ್ಜಾಗಿಸಬೇಕಾದ ಅನಿವಾರ್ಯತೆ ಇದೆ ಎಂದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಭಾರತೀಯ ವಿದ್ಯಾರ್ಥಿ ಸಂಘದ ಜಿಲ್ಲಾ ಸಂಯೋಜಕರಾದ ಚಿದಂಬರರವರು ಮಾತನಾಡಿ ಶೋಷಿತ ವರ್ಗವು ಇಂದಿಗೂ ಶಿಕ್ಷಣದಿಂದ ವಂಚಿತರಾಗುತ್ತಲೇ ಇದೆ, ಬ್ರಾಹ್ಮಣ್ಯ ಅಧಿಪತ್ಯವು ಇಂದು ಒಂದು ವರ್ಗವನ್ನು ಶಿಕ್ಷಣದಿಂದ ತಡೆಯುತ್ತಿದ್ದು ಈ ಅಧಿಪತ್ಯವನ್ನು ನಾವು ಸೋಲಿಸಬೇಕಾಗಿದೆ. ಈ ದೇಶದ ಮೂಲನಿವಾಸಿಗಳಾದ ಬಹುಸಂಖ್ಯಾತರಾಗಿರುವ ದಲಿತರು,ಮುಸಲ್ಮಾನರು ಒಟ್ಟಾಗಿ ಸೇರಿದರೆ ಇಲ್ಲಿನ ಈ ಕೇಸರೀಕರಣವನ್ನು ಖಂಡಿತವಾಗಿಯೂ ತಡೆಯಬಹುದು ಎಂದರು. ಕ್ಯಾಂಪಸ್ ಫ್ರಂಟ್ ಜಿಲ್ಲಾ ನಾಯಕಿ ಶಝ್ಮಾ ಫಾತಿಮಾ ಕೇಸರೀಕರಣದಿಂದ ವಿದ್ಯಾರ್ಥಿನಿಯರು ಎದುರಿಸಲಿರುವ ಸವಾಲುಗಳನ್ನು ವಿವರಿಸಿದರು. ಕ್ಯಾಂಪಸ್ ಫ್ರಂಟ್ ರಾಜ್ಯ ಸಮಿತಿ ಸದಸ್ಯ ಚಾಂದ್ ಸಲ್ಮಾನ್ ಸಮಾರೋಪ ಮಾತುಗಳನ್ನಾಡಿದರು. ಜಿಲ್ಲಾಧ್ಯಕ್ಷ ರಸೂಲ್ ಖಾನ್ ಸ್ವಾಗತಿಸಿ ಜಿಲ್ಲಾ ಕಾರ್ಯದರ್ಶಿ ಫರಾನ್ ವಂದಿಸಿದರು. ಜಿಲ್ಲಾ ಸಮಿತಿ ಸದಸ್ಯ ಶಹಬಾಝ್ ಕಾರ್ಯಕ್ರಮ ನಿರೂಪಿಸಿದರು.
ನೀಟ್ ಫಲಿತಾಂಶ ಬಳಿಕ ವಿದ್ಯಾರ್ಥಿ ಆತ್ಮಹತ್ಯೆ- ನೀಟ್ ಗೆ ಇನ್ನೆಷ್ಟು ವಿದ್ಯಾರ್ಥಿಗಳು ಬಲಿಪಶುಗಳಾಗಬೇಕು; ಕ್ಯಾಂಪಸ್ ಫ್ರಂಟ್

> ನೀಟ್ ಪರೀಕ್ಷೆ ರದ್ದುಗೊಳಿಸಿ

ಕುಂದಾಪುರ: ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕಗಳು ಪಡೆದ ಕಾರಣಕ್ಕಾಗಿ ತನ್ನ ಮುಂದಿನ ವಿದ್ಯಾಭ್ಯಾಸಕ್ಕೆ ಸ್ಥಾನ ಸಿಗುವುದಿಲ್ಲವೆಂದು ಮನನೊಂದು ಕುಂದಾಪುರ ತಾಲೂಕಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾದ ಸಾಯಿಷ್ ಶೆಟ್ಟಿ ಆತ್ಮಹತ್ಯೆಗೈದಿದ್ದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕುಂದಾಪುರ ಸಮಿತಿಯು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದೆ.
ಇಂದು ನೀಟ್ ಎಂಬ ಕೇಂದ್ರೀಕೃತ
ಪರೀಕ್ಷೆಯ ಪರಿಣಾಮವಾಗಿ ಹಲವಾರು ವಿದ್ಯಾರ್ಥಿಗಳು ತಮ್ಮ ಜೀವವನ್ನು ಕಳೆದಿದ್ದು, ಇಂದು ನೀಟ್ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗುತ್ತಿದೆ. ನೀಟ್ ಪರೀಕ್ಷೆಯ ಲೋಪ ದೋಷ ಗಳನ್ನು ಅರಿತು ತಮಿಳುನಾಡು ಸರ್ಕಾರ ನಿರ್ಣಯವನ್ನು ಸಹ ಮಂಡಿಸಿತ್ತು, ಸಿ.ಈ. ಟಿ  ಸೀಟ್ ಹಂಚಿಕೆಯ ವಿಚಾರದಲ್ಲೂ ಬದಲಾವಣೆ ತರಲು ಈಗಾಗಲೇ ಹೈಕೋರ್ಟ್ ಮಹತ್ವದ ತೀರ್ಪನ್ನು ನೀಡಿತು. ಈ ನೀಟ್ ಎಂಬ ಅರ್ಹತಾ ಪರೀಕ್ಷೆಯಿಂದ ದೊಡ್ಡ ಪ್ರಮಾಣದ ನಷ್ಟ ತುಳಿತಕ್ಕೊಳಗಾದ ಸಮುದಾಯಗಳಿಗೆ ಆಗುತ್ತಿರುವುದು ಪರೀಕ್ಷೆಯ ಮೂಲಕ ವೈದ್ಯಕೀಯ ವಿದ್ಯಾಭ್ಯಾಸಕ್ಕೆ ಆಯ್ಕೆಯಾಗಿರುವ ವರ್ಗದ ವಿದ್ಯಾರ್ಥಿಗಳ ಅಂಕಿ ಅಂಶಗಳೇ ಸಾರಿ ಹೇಳುತ್ತವೆ.

ಇದೆಲ್ಲವನ್ನು ಗಮನಿಸುವಾಗ ಹಲವು ರೀತಿಯ ಗೊಂದಲಗಳಿಂದ ಕೂಡಿರುವ ನೀಟ್ ಪರೀಕ್ಷೆಯನ್ನು ರದ್ದುಗೊಳಿಸಬೇಕು ಹಾಗೂ ವಿದ್ಯಾರ್ಥಿ ಸಾಯಿಷ್ ಶೆಟ್ಟಿ ಕುಟುಂಬಕ್ಕೆ ಪರಿಹಾರ ಒದಗಿಸಬೇಕೆಂದು ಕ್ಯಾಂಪಸ್ ಫ್ರಂಟ್ ಕುಂದಾಪುರ ಅಧ್ಯಕ್ಷರಾದ ಮುಜಾಹಿದ್ ಆಗ್ರಹಿಸಿದ್ದಾರೆ.
ಪಿ.ಎಸ್.ಐ ಹಗರಣದ ಸತ್ಯಾಂಶವನ್ನು ಬಯಲಿಗೆಳೆಯಲು ಶಾಸಕ ಬಸವರಾಜ್ ಧಡೆಸುಗೂರ್ ಬಂಧನ ಅನಿವಾರ್ಯ : ಕ್ಯಾಂಪಸ್ ಫ್ರಂಟ್

ಕೊಪ್ಪಳ : ರಾಜ್ಯದಲ್ಲಿ ಪ್ರತಿಯೊಂದರಲ್ಲೂ ಭ್ರಷ್ಟಾಚಾರ ತುಂಬಿ ತುಳುಕುತ್ತಾ ಇದ್ದು, ಇದರ ಮುಂದುವರೆದ ಭಾಗವಾಗಿ ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಪಿ.ಎಸ್.ಐ ಹಗರಣ ನಡೆದಿದ್ದು ಬಯಲಿಗೆ ಬಂದಿದೆ, ಈ ಹಗರಣದ ತನಿಖೆಯನ್ನು ಸಿ.ಐ.ಡಿ ಅಧಿಕಾರಿಗಳು ನಡೆಸುತ್ತಿದ್ದು ಇದರಲ್ಲಿ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳ ಬಂಧನ ಕೂಡ ಆಗಿದೆ, ಇನ್ನಷ್ಟು ಅಧಿಕಾರಿಗಳು, ಶಾಸಕರು, ಸಚಿವರುಗಳ ಪಾತ್ರ ಇದರಲ್ಲಿ ಇದೆ ಎಂಬ ಅನುಮಾನವೂ ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಕನಕಗಿರಿಯ ಶಾಸಕರ ಫೋನ್ ಸಂಭಾಷಣೆಯಿಂದ ಗೋಚರಿಸುತ್ತದೆ. ನೇರವಾಗಿ ಖುದ್ದು ಸರ್ಕಾರವೇ ಈ ಹಗರಣದಲ್ಲಿ ಭಾಗಿಯಾಗಿದೆ ಎಂದು ತಿಳಿಯಬಹುದು ಆದ್ದರಿಂದ ಸಿ.ಐ.ಡಿ ಕೂಡಲೇ ಅತೀ ಶೀಘ್ರವಾಗಿ ಕನಕಗಿರಿಯ ಶಾಸಕ ಬಸವರಾಜ್ ಧಡೆಸುಗೂರ್ ರನ್ನು ಬಂಧಿಸಿ ತನಿಖೆಗೊಳ್ಳಪಡಿಸಿದರೆ ಇಡೀ ಹಗರಣದ ಸತ್ಯಾಂಶವನ್ನು ಬಯಲಿಗೊಳ್ಳಪಡಿಸಬಹುದು. ಆದ್ದರಿಂದ ಶಾಸಕರ ಬಂಧನ ಅನಿವಾರ್ಯವಾಗಿದೆ.
ಒಂದು ವೇಳೆ ಬಂಧಿಸದೇ ಭ್ರಷ್ಟ ಸರ್ಕಾರ ಮತ್ತು ಶಾಸಕರ ಪರವಾಗಿ ಸಿ.ಐ.ಡಿ ಕಾರ್ಯನಿರ್ವಹಿಸಿದರೆ ಜಿಲ್ಲಾಧ್ಯಂತ ವಿದ್ಯಾರ್ಥಿಗಳನ್ನು ಸಂಘಟಿಸಿ ಉಗ್ರ ಹೋರಾಟ ನಡೆಸುತ್ತೇವೆ ಎಂದು ಕ್ಯಾಂಪಸ್ ಫ್ರಂಟ್ ಕೊಪ್ಪಳ ಜಿಲ್ಲಾಧ್ಯಕ್ಷರಾದ ಅತಿಕುರಹ್ಮಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಕ್ಯಾಂಪಸ್ ಫ್ರಂಟ್ ಬಳ್ಳಾರಿ ಜಿಲ್ಲೆಯ ವತಿಯಿಂದ ಹೆಚ್ಚಿಸಿರುವ ಪರೀಕ್ಷಾ ಶುಲ್ಕವನ್ನು ಕಡಿಮೆಗೊಳಿಸಿ, ಶುಲ್ಕ ಕಟ್ಟುವ ಸಮಯ ವಿಸ್ತರಿಸಲು ಅಗ್ರಹಿಸಿ ಬಳ್ಳಾರಿ ಯೂನಿವರ್ಸಿಟಿಗೆ ಮಾರ್ಚ್

ಬಳ್ಳಾರಿ : ಕ್ಯಾಂಪಸ್ ಫ್ರಂಟ್ ಬಳ್ಳಾರಿ ಜಿಲ್ಲೆಯ ವತಿಯಿಂದ ಹೆಚ್ಚಿಸಿರುವ ಪರೀಕ್ಷಾ ಶುಲ್ಕವನ್ನು ಕಡಿಮೆಗೊಳಿಸಿ, ಶುಲ್ಕ ಕಟ್ಟುವ ಸಮಯ ವಿಸ್ತರಿಸಲು ಅಗ್ರಹಿಸಿ ಬಳ್ಳಾರಿ ಯೂನಿವರ್ಸಿಟಿಗೆ ಮಾರ್ಚ್ ಮಾಡಲಾಯಿತು.

ಕ್ಯಾಂಪಸ್ ಫ್ರಂಟ್ ರಾಜ್ಯ ಸಮಿತಿ ಸದಸ್ಯರಾದ ಚಾಂದ್ ಸಲ್ಮಾನ್ ಮಾತನಾಡಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎಲ್ಲ ವಿಷಯದಲ್ಲಿ ಬೆಲೆಯೇರಿಕೆಯಾಗಿದ್ದು ಜನರು ಹಣವಿಲ್ಲದೆ ತತ್ತರಿಸಿ ಹೋಗಿದ್ದಾರೆ, ಇಂತಹ ಸಂದರ್ಭದಲ್ಲಿ ಸರ್ಕಾರ ಮತ್ತು ಬಳ್ಳಾರಿ ವಿಶ್ವವಿದ್ಯಾಲಯದಿಂದ ಪರೀಕ್ಷಾ ಶುಲ್ಕ ಹೆಚ್ಚಳ ಮಾಡಿ ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡಲು ಹೊರಟಿದ್ದು ಸರಿಯಲ್ಲ, ಪರೀಕ್ಷೆ ಸಂದರ್ಭದಲ್ಲಿ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿಸಿ ಬೀದಿಗೆ ತಂದು ನಿಲ್ಲಿಸಿದೆ, ವಿದ್ಯಾರ್ಥಿಗಳಿಂದ ಇಷ್ಟು ವಿರೋಧ ವ್ಯಕ್ತವಾದರು ಉಪಕುಲಪತಿಗಳು ಪರೀಕ್ಷಾ ಶುಲ್ಕ ಕಡಿಮೆ ಮಾಡುವುದಿಲ್ಲ ಎಂದು ಹೇಳುತ್ತಿದ್ದು ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದರೆ ನಮ್ಮ ಬೇಡಿಕೆ ಇಷ್ಟೇ ಪರೀಕ್ಷೆ ಶುಲ್ಕ ಕಟ್ಟುವ ಸಮಯವನ್ನು ವಿಸ್ತರಿಸಬೇಕು ಹಾಗೂ ಪರೀಕ್ಷಾ ಶುಲ್ಕವನ್ನು ಕಡಿಮೆ ಮಾಡಬೇಕು ಒಂದು ವೇಳೆ ವಿಶ್ವವಿದ್ಯಾಲಯದ ಈ ಸಮಸ್ಯೆಯನ್ನು ಬಗೆಹರಿಸದೆ ಹೋದರೆ ಇನ್ನುಮುಂದೆ ಬಳ್ಳಾರಿ ವಿಶ್ವವಿದ್ಯಾಲಯದ ಅಧೀನದಲ್ಲಿ ಬರುವ ಎಲ್ಲ ಕಾಲೇಜುಗಳ ವಿದ್ಯಾರ್ಥಿಗಳನ್ನು ಸಂಘಟಿಸಿ ದೊಡ್ಡ ಪ್ರಮಾಣದಲ್ಲಿ ವಿಶ್ವವಿದ್ಯಾಲಯದ ಮುಂದೆ ಮತ್ತೆ ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಬಳ್ಳಾರಿ ಜಿಲ್ಲಾಧ್ಯಕ್ಷರಾದ ಸೋಹೈಲ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ಕಾರ್ಯದರ್ಶಿ ಹಬೀಬ್, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ - ಬಳ್ಳಾರಿ ಜಿಲ್ಲೆ
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅತಿಥಿ ಶಿಕ್ಷಕರ ದರಣಿಯಲ್ಲಿ ಕ್ಯಾಂಪಸ್ ಫ್ರಂಟ್ ಭಾಗಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 900 ಅತಿಥಿ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದು ಕಳೆದ 4 ತಿಂಗಳಿನಿಂದ ಗೌರವಧನ ಬಿಡುಗಡೆಯಾಗಲಿಲ್ಲ ಮತ್ತು ಉದ್ಯೋಗದ ಭದ್ರತೆ ಇಲ್ಲ ಎಂಬ ಹಲವಾರು ಸಮಸ್ಯೆಯನ್ನು ಇಟ್ಟುಕೊಂಡು ಇಂದು ಅತಿಥಿ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷೆಯಾದ ಶ್ರೀಮತಿ ಚಂದ್ರಿಕಾ ಅವರ ನೇತೃತ್ವದಲ್ಲಿ ಮಂಗಳೂರಿನ ಮಿನಿ ವಿಧಾನಸೌಧದ ಮುಂಭಾಗ ಧರಣಿ ನಡೆಯಿತು.
ಅತಿಥಿ ಶಿಕ್ಷಕರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಧರಣಿಯಲ್ಲಿ ಕ್ಯಾಂಪಸ್ ಫ್ರಂಟ್ ದಕ್ಷಿಣ ಕನ್ನಡ ಜಿಲ್ಲಾ ನಿಯೋಗ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅತಿಥಿ ಶಿಕ್ಷಕರನ್ನು ಗುಲಾಮರನ್ನಾಗಿ ನೋಡಿಕೊಳ್ಳಲಾಗುತ್ತಿದೆ ಸರ್ಕಾರ ಇವರ ಸಂಕಷ್ಟಗಳನ್ನ ನೋಡುತ್ತಿಲ್ಲ ಮತ್ತು ಸ್ಪಂದಿಸುತ್ತಿಲ್ಲ. ಇವತ್ತು ಕಾರ್ಮಿಕ ವರ್ಗ, ಶಿಕ್ಷಕ ವರ್ಗ, ಮತ್ತು ವಿದ್ಯಾರ್ಥಿಗಳು ಬೀದಿಯಲ್ಲಿ ನಿಂತು ಹೋರಾಟ ಮಾಡುವ ಪರಿಸ್ಥಿತಿ ಈ ಸರ್ಕಾರದ ದುರ್ಬಲ ಆಡಳಿತದ ನಿದರ್ಶನವಾಗಿದೆ. ಇವತ್ತು ಅತಿಥಿ ಶಿಕ್ಷಕರೊಂದಿಗೆ ಕೈ ಜೋಡಿಸದೆ ಪಾಠ ಮಾಡುವ ಸರ್ಕಾರಿ ಶಿಕ್ಷಕರು ಎನ್ ಈ ಪಿ 2020 ರ ಹೊಸ ಕರಾಳ ನೀತಿಯಿಂದ ಬೀದಿಗೆ ಬಂದು ಹೋರಾಟ ಮಾಡುವ ದಿನಗಳು ದೂರವಿಲ್ಲ ಎಂದು ಕ್ಯಾಂಪಸ್ ಫ್ರಂಟ್ ಜಿಲ್ಲಾ ಮುಖಂಡ ಸಂಶುದ್ದೀನ್ ಎಚ್ಚರಿಸಿದರು ಹಾಗೂ ಸರ್ಕಾರ ಶೀಘ್ರ ಸಮಸ್ಯೆಯನ್ನು ಬಗೆಹರಿಸಬೇಕೆಂದು ಆಗ್ರಹಿಸಿದರು. ಧರಣಿಯಲ್ಲಿ ಅತಿಥಿ ಶಿಕ್ಷಕ ಸಂಘದ ಕಾರ್ಯದರ್ಶಿ ಚಿತ್ರಕಲಾ ಮತ್ತು ಪದಾಧಿಕಾರಿಗಳು, ಕ್ಯಾಂಪಸ್ ಫ್ರಂಟ್ ಗ್ರಾಮಾಂತರ ಜಿಲ್ಲಾಧ್ಯಕ್ಷ ಅಶ್ರಫ್ ಪೊರ್ಕೊಡಿ ಹಾಗೂ ಜಿಲ್ಲಾ ಮುಖಂಡರು ಉಪಸ್ಥಿತರಿದ್ದರು.