kpsc_study_group📚📖
14.2K subscribers
2.25K photos
48 videos
90 files
460 links
ಪ್ರತಿದಿನಪ್ರಚಲಿತ ವಿದ್ಯಮಾನಗಳನ್ನು ನಮ್ಮ ಟೆಲಿಗ್ರಾಂ ಚಾನೆಲ್ ನಲ್ಲಿ ಕಳಿಸಲಾಗುವುದು🎈🎈#kpsc #psi #sda #fda
Download Telegram
🌸ಪ್ರಸ್ತುತ <-> ಪ್ರಚಲಿತ

👉'RBI' ನಿಂದ 'Paytm' ಬ್ಯಾಂಕ್ ನಿರ್ಬಂಧದ ಗಡುವು ಮಾ.15 ರವರೆಗೆ ವಿಸ್ತರಣೆ
--> ಈ ಹಿಂದೆ ನಿಗದಿಪಡಿಸಿದ ಫೆಬ್ರವರಿ 29, 2024 ರಿಂದ ಮಾರ್ಚ್ 15 ರವರೆಗೆ ವಿಸ್ತರಿಸಿದೆ.

👉ʻಸಲಿಂಗ ವಿವಾಹʼವನ್ನು ಕಾನೂನುಬದ್ಧಗೊಳಿಸಿದ 'ಗ್ರೀಸ್' ದೇಶ
--> ಈ ಕಾನೂನು ಸಲಿಂಗ ದಂಪತಿಗಳಿಗೆ ಮದುವೆಯಾಗುವ ಮತ್ತು ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಹಕ್ಕನ್ನು ನೀಡುತ್ತದೆ.
--> ಇಂತಹ ಒಕ್ಕೂಟಗಳನ್ನು ಅನುಮತಿಸಿದ ಮೊದಲ ಆರ್ಥೊಡಾಕ್ಸ್ ಕ್ರಿಶ್ಚಿಯನ್ ದೇಶ ಮತ್ತು ವಿಶ್ವದ 37ನೇ ರಾಷ್ಟ್ರವಾಗಲಿದೆ

👉'ಅನ್ನ ಸುವಿಧಾ ಯೋಜನೆ'
-> 80 ವರ್ಷ ದಾಟಿದ ಹಿರಿಯರ ಮನೆ ಬಾಗಿಲಿಗೆ ಆಹಾರ ತಲುಪಿಸುವ 'ಅನ್ನ ಸುವಿಧಾ ಯೋಜನೆ'ಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ನಲ್ಲಿ ಘೋಷಿಸಿದ್ದಾರೆ.
--> ರಾಜ್ಯದ ಅಂದಾಜು 80,000 ಫಲಾನುಭವಿಗಳಿಗೆ ಇದರಿಂದ ಅನುಕೂಲವಾಗುತ್ತದೆ.

👉28 ವರ್ಷಗಳ ನಂತರ ಭಾರತವು ವಿಶ್ವ ಸುಂದರಿ 2023 ಸ್ಪರ್ಧೆ ಆಯೋಜನೆ.
--> ಪ್ರತಿಷ್ಠಿತ ಅಂತರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯ 71ನೇ ಆವೃತ್ತಿಯು ಭಾತರದಲ್ಲಿ ನಡೆಯಲಿದೆ
--> ಭಾರತವು ವಿಶ್ವ ಸುಂದರಿ ಸ್ಪರ್ಧೆಯನ್ನು 1996ರಲ್ಲಿ ಕೊನೆಯದಾಗಿ ಆಯೋಜಿಸಿತ್ತು.

👉ಅಕ್ಕಿಯೊಳಗೆ ಗೋಮಾಂಸ:ದಕ್ಷಿಣ ಕೊರಿಯಾ ವಿಜ್ಞಾನಿಗಳ ಪ್ರಯೋಗ ಯಶಸ್ವಿ
--> ವಿಜ್ಞಾನಿಗಳು ಹೊಸ ರೀತಿಯ ಮಾಂಸ ಭರಿತ (meaty) ಹೈಬ್ರಿಡ್ ಅಕ್ಕಿಯನ್ನು (hybrid food) ತಯಾರಿಸಿದ್ದಾರೆ. ಅಗ್ಗವಾದ ಮತ್ತು ಪರಿಸರ ಸ್ನೇಹಿಯಾಗಿರುವ ಈ ಅಕ್ಕಿಗೆ ಗೋಮಾಂಸವನ್ನು (beef) ಸೇರಿಸಲಾಗಿದೆ
👍5
🌸ಪ್ರಸ್ತುತ <-> ಪ್ರಚಲಿತ

👉ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ)'ಅಮೃತಬಾಲ್' ಹೆಸರಿನ ಹೊಸ ಜೀವ ವಿಮಾ ಯೋಜನೆಯನ್ನು ಪ್ರಾರಂಭಿಸಿದೆ.
--> ಎಲ್ಐಸಿ ಅಧ್ಯಕ್ಷ: ಸಿದ್ಧಾರ್ಥ ಮೊಹಾಂತಿ

👉ವಿಶ್ವದ ಮೊದಲ ಏರ್ ಟ್ಯಾಕ್ಸಿ
--> ದುಬೈನಲ್ಲಿ ನಡೆದ ವಿಶ್ವ ಸರ್ಕಾರದ ಶೃಂಗಸಭೆಯಲ್ಲಿ ವಿಶ್ವದ ಮೊದಲ ಏರ್ ಟ್ಯಾಕ್ಸಿ ಸೇವೆಯನ್ನು ಪ್ರಾರಂಭಿಸಲು ದುಬೈ ಒಪ್ಪಂದಗಳಿಗೆ ಸಹಿ ಹಾಕಿದೆ.
--> ಶೃಂಗಸಭೆ 2024 ರ ವಿಷಯ 'ಭವಿಷ್ಯದ ಸರ್ಕಾರಗಳನ್ನು ರೂಪಿಸುವುದು'

👉ಎಲಿವೇಟೆಡ್‌ ರಸ್ತೆ ಇನ್ನು ಮುಂದೆ ರಾಮಸೇತು
ಉತ್ತರಪ್ರದೇಶದ ಗಾಜಿಯಾಬಾದ್‌ ಮತ್ತು ದೆಹಲಿಯ ಯುಪಿ ಗೇಟ್‌ ಸಂಪರ್ಕಿಸುವ ಪ್ರಸಿದ್ಧ “ರಾಜ್‌ನಗರ್‌ಹಿಂಡನ್‌ ಎಲಿವೇಟೆಡ್‌ ರಸ್ತೆ’ಗೆ “ರಾಮಸೇತು” ಎಂದು ಮರುನಾಮಕರಣ ಮಾಡಲಾಗಿದೆ

👉ಅಮೆರಿಕ,ಚೀನಾದ ಬಳಿಕ ʻಡಿಜಿಟಲೀಕರಣʼಅಳವಡಿಸಿಕೊಂಡ 3ನೇ ಅತಿದೊಡ್ಡ ದೇಶ ಭಾರತ

ಜಾಗತಿಕ ಶ್ರೇಯಾಂಕದಲ್ಲಿನ ಸುಧಾರಣೆಯೊಂದಿಗೆ, ಭಾರತವು ಈಗ ಜಿ 20 ದೇಶಗಳಲ್ಲಿ ಯುಎಸ್ ಮತ್ತು ಚೀನಾದ ನಂತರ ಡಿಜಿಟಲೀಕರಣವನ್ನು ಅಳವಡಿಸಿಕೊಂಡ ಮೂರನೇ ಅತಿದೊಡ್ಡ ದೇಶವಾಗಿದೆ.

👉 ʻಜಾತಿ ಸಮೀಕ್ಷೆʼಗೆ ನಿರ್ಣಯ ಅಂಗೀಕರಿಸಿದ ತೆಲಂಗಾಣ ವಿಧಾನಸಭೆ
➼ ರಾಜ್ಯದ ಇತರ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿಗಳು (ಎಸ್ಸಿ), ಪರಿಶಿಷ್ಟ ಪಂಗಡಗಳು (ಎಸ್ಟಿ) ಮತ್ತು ಇತರ ದುರ್ಬಲ ವರ್ಗಗಳಿಗೆ ಸಾಮಾಜಿಕ-ಆರ್ಥಿಕ, ಶೈಕ್ಷಣಿಕ, ಉದ್ಯೋಗ ಮತ್ತು ರಾಜಕೀಯ ಅವಕಾಶಗಳನ್ನು ಒದಗಿಸಲು ಸಮಗ್ರ ಕುಟುಂಬ ಜಾತಿ ಸಮೀಕ್ಷೆಯ ನಿರ್ಣಯವನ್ನು 'ತೆಲಂಗಾಣ' ವಿಧಾನಸಭೆ ಸರ್ವಾನುಮತದಿಂದ ಅಂಗೀಕರಿಸಿದೆ.
➼ ಆಂಧ್ರಪ್ರದೇಶ ಮತ್ತು ಬಿಹಾರದ ನಂತರ ಇಂತಹ ಜಾತಿ ಆಧಾರಿತ ಜನಸಂಖ್ಯೆಯನ್ನು ಹೊಂದಿರುವ ಮೂರನೇ ರಾಜ್ಯ ತೆಲಂಗಾಣವಾಗಲಿದೆ
👍10
🌸ಖ್ಯಾತ ಉರ್ದು ಕವಿ ಗುಲ್ಜಾರ್, ಸಂಸ್ಕೃತ ವಿದ್ವಾಂಸ ರಾಮಭದ್ರಾಚಾರ್ಯಗೆ ಜ್ಞಾನಪೀಠ ಪ್ರಶಸ್ತಿ

ಬಾಲಿವುಡ್‌ನ ಖ್ಯಾತ ಚಿತ್ರ ಸಾಹಿತಿ ಹಾಗೂ ಉರ್ದು ಕವಿ ಗುಲ್ಜಾರ್‌ ಮತ್ತು ಸಂಸ್ಕೃತ ವಿದ್ವಾಂಸ ಜಗದ್ಗುರು ರಾಮಭದ್ರಾಚಾರ್ಯ ಅವರು 58ನೇ ಜ್ಞಾನಪೀಠ ಪ್ರಶಸ್ತಿಗೆ (2023) ಭಾಜನರಾಗಿದ್ದಾರೆ

👉ಗುಲ್ಜಾರ್

--> ಹಿಂದಿ ಚಿತ್ರರಂಗದಲ್ಲಿ ಸಿನಿಮಾ ಸಾಹಿತಿ, ಗೀತೆ ರಚನೆಕಾರರಾಗಿ ಗುರುತಿಸಿಕೊಂಡಿದ್ದು, ಅತ್ಯುತ್ತಮ ಉರ್ದು ಕವಿಗಳಲ್ಲಿ ಒಬ್ಬರು.
--> ಗುಲ್ಜಾರ್ ಅವರ ನಿಜವಾದ ಹೆಸರು ಸಂಪೂರ್ಣ ಸಿಂಗ್ ಕಲ್ರಾ.
--> ಸಾಹಿತ್ಯ ಅಕಾಡೆಮಿ ಪ್ರಶಸ್ತಿ (2002), ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ (2013), ಪದ್ಮ ಭೂಷಣ (2004) ಹಾಗೂ ಐದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ

👉ರಾಮಭದ್ರಾಚಾರ್ಯರು

--> ಚಿತ್ರಕೂಟದ ತುಳಸಿ ಪೀಠದ ಸಂಸ್ಥಾಪಕ ಮತ್ತು ಮುಖ್ಯಸ್ಥರು
--> ರಾಮಭದ್ರಾಚಾರ್ಯರು ಹೆಸರಾಂತ ಹಿಂದೂ ಆಧ್ಯಾತ್ಮಿಕ ನಾಯಕ,ಶಿಕ್ಷಣತಜ್ಞ ಮತ್ತು 100 ಕ್ಕೂ ಹೆಚ್ಚು ಪುಸ್ತಕಗಳ ಬರಹಗಾರರಾಗಿದ್ದಾರೆ.
--> ಜನಿಸಿದ 2 ತಿಂಗಳಲ್ಲೇ ದೃಷ್ಟಿ ಕಳೆದುಕೊಂಡ ಜಗದ್ಗುರು ರಾಮಭದ್ರಾಚಾರ್ಯರು ಅತ್ಯುತ್ತಮ ಶಿಕ್ಷಕ ಮತ್ತು ಸಂಸ್ಕೃತ ಭಾಷಾ ಪಂಡಿತರಾಗಿದ್ದಾರೆ.
--> ಜಗದ್ಗುರು ರಾಮಭದ್ರಾಚಾರ್ಯರಿಗೆ 22 ಭಾಷೆಗಳ ಜ್ಞಾನವಿದೆ. ಜಗದ್ಗುರು ರಾಮಭದ್ರಾಚಾರ್ಯರಿಗೆ ಭಾರತ ಸರ್ಕಾರ 2015 ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.
👍13❤3
🌸ಪ್ರಸ್ತುತ -- ಪ್ರಚಲಿತ

👉'ಕೆ-ರೈಸ್' ಕೇರಳ ಸರ್ಕಾರದಿಂದ ಹೊಸ ಯೋಜನೆ
-> ಕೇಂದ್ರ ಸರ್ಕಾರದ ಭಾರತ್ ಅಕ್ಕಿಗೆ ಪರ್ಯಾಯವಾಗಿ ಕೆ-ರೈಸ್ ತರಲು ಕೇರಳ ಸರ್ಕಾರ ಮುಂದಾಗಿದೆ.
-> ಈ ಅಕ್ಕಿಯನ್ನು ಸಪ್ಲೈಕೋ ಮೂಲಕ ವಿತರಿಸಲು ಉದ್ದೇಶಿಸಲಾಗಿದೆ.

👉ದೇಶದ ಜನಪ್ರಿಯ ಮುಖ್ಯಮಂತ್ರಿಗಳು

--> 1ನೇ ಸ್ಥಾನ ಒಡಿಶಾ ಮುಖ್ಯಮಂತ್ರಿ
'ನವೀನ್ ಪಟ್ನಾಯಕ್'
-->2ನೇ ಸ್ಥಾನ ಉತ್ತರ ಪ್ರದೇಶದ ಮುಖ್ಯಮಂತ್ರಿ
'ಯೋಗಿ ಆದಿತ್ಯನಾಥ್'
--> 3ನೇ ಸ್ಥಾನ ಅಸ್ಸಾಂನ ಮುಖ್ಯಮಂತ್ರಿ
'ಹಿಮಂತ ಬಿಸ್ವಾ ಶರ್ಮಾ'
--> 4ನೇ ಸ್ಥಾನ ಗುಜರಾತ್‌ ಮುಖ್ಯಮಂತ್ರಿ
'ಭೂಪೇಂದ್ರ ಪಟೇಲ್'
--> 5ನೇ ಸ್ಥಾನ ತ್ರಿಪುರಾ ಮುಖ್ಯಮಂತ್ರಿ
'ಡಾ.ಮಾಣಿಕ್ ಸಹಾ'

👉 ಜೈನ ಮಠದ ʻಆಚಾರ್ಯ ವಿದ್ಯಾಸಾಗರ್ ಮಹಾರಾಜ್ʼ ಸಮಾಧಿ ಮರಣ
--> ಜೈನ ಸಮುದಾಯದ ಪ್ರಸ್ತುತ ಮಹಾವೀರ ಆಚಾರ್ಯ ವಿದ್ಯಾಸಾಗರ್ ಮಹಾರಾಜ್ ಅವರು ಸಮಾಧಿ ಪ್ರಕ್ರಿಯೆಯನ್ನು ಪ್ರಾರಂಭಿಸಿ ಆಹಾರ ಮತ್ತು ನೀರನ್ನು ತ್ಯಜಿಸಿದ ಮೂರು ದಿನಗಳ ನಂತರ ಛತ್ತೀಸ್ ಗಢದ ಡೊಂಗರ್ ಗಢದಲ್ಲಿ ಕೊನೆಯುಸಿರೆಳೆದಿದ್ದಾರೆ.
--> ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ಸದಲಗಾ ಗ್ರಾಮದಲ್ಲಿ 10 ಅಕ್ಟೋಬರ್ 1946 ರಂದು ಜನಿಸಿದರು
👍8❤1
👉ಪ್ರಧಾನಿ ಮೋದಿಯಿಂದ ಓಖಾ-ಬೆಟ್ ದ್ವಾರಕಾ 'ಸಿಗ್ನೇಚರ್' ಸೇತುವೆ ಉದ್ಘಾಟನೆ.

--> ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 25 ರಂದು ದ್ವಾರಕಾದ ಯಾತ್ರಾಸ್ಥಳದಲ್ಲಿ ಓಖಾ ಮತ್ತು ಬೇಟ್ ನಡುವಿನ ಸಿಗ್ನೇಚರ್ ಸೇತುವೆಯನ್ನು ಉದ್ಘಾಟಿಸಲಿದ್ದಾರೆ.
--> 2.5 ಕಿಲೋಮೀಟರ್ ಉದ್ದದ ಈ ಸೇತುವೆಯು ಸ್ಥಳೀಯ ನಿವಾಸಿಗಳು ಮತ್ತು ಪೂಜ್ಯ ದ್ವಾರಕಾಧೀಶ ದೇವಾಲಯಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಅಪಾರ ಆಕರ್ಷಣೆಯನ್ನು ಹೊಂದಿದೆ
--> 2017 ರಲ್ಲಿ ಭೂಮಿ ಪೂಜೆ ಸಮಾರಂಭದೊಂದಿಗೆ ಕೇಂದ್ರವು ಪ್ರಾರಂಭಿಸಿತ್ತು.
--> 2.5 ಕಿ.ಮೀ ಉದ್ದದ ಈ ಸೇತುವೆಯನ್ನು 978 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ
--> ಇದು ಭಾರತದ ಅತಿ ಉದ್ದದ ಕೇಬಲ್-ಸ್ಟೇ ಸೇತುವೆ ಎಂಬ ಹೆಗ್ಗಳಿಕೆಯನ್ನು ಹೊಂದಿದೆ, ಫುಟ್ಪಾತ್ ನ ಮೇಲ್ಭಾಗದಲ್ಲಿ ಸೌರ ಫಲಕಗಳನ್ನು ಸ್ಥಾಪಿಸಲಾಗಿದೆ, ಇದು ಒಂದು ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತದೆ
👍7❤4
🔰ಭಾರತದ ನೆರೆಹೊರೆಯ ರಾಷ್ಟ್ರಗಳು🔰

🔹 ಭಾರತದ ಪೂರ್ವದ ದೇಶಗಳು - ಬಾಂಗ್ಲದೇಶ, ಮಯನ್ಮಾರ್

🔹 ಭಾರತದ ಈಶಾನ್ಯದಲ್ಲಿರುವ ದೇಶ -ನೇಪಾಳ ಮತ್ತು ಭೂತಾನ್

🔹 ಭಾರತದ ಉತ್ತರದಲ್ಲಿರುವ ದೇಶ -ಚೀನಾ

🔹 ವಾಯುವ್ಯದಲ್ಲಿ ಇರುವ ದೇಶಗಳು
- ಪಾಕಿಸ್ತಾನ, ಅಪಘಾನಿಸ್ತಾನ

🔹 ಭಾರತದ ದಕ್ಷಿಣದಲ್ಲಿರುವ ದೇಶ -ಶ್ರೀಲಂಕಾ

🔹 ಭಾರತದ ನೈರುತ್ಯ ದಲ್ಲಿರುವ ದೇಶ -ಮಾಲ್ಡಿವ್ಸ್

🔹 ಭಾರತದ ಪೂರ್ವಕ್ಕೆ -ಬಂಗಾಳಕೊಲ್ಲಿ

🔹 ಭಾರತದ ಪಚ್ಚಿಮಕ್ಕೆ -ಅರಬ್ಬಿ ಸಮುದ್ರ

🔹 ಭಾರತದ ದಕ್ಷಿಣಕ್ಕೆ -ಹಿಂದೂ ಮಹಾಸಾಗರ

🔹 ಭಾರತದ ಉತ್ತರಕ್ಕೆ -ಹಿಮಾಲಯ ಪರ್ವತ

➖➖➖➖➖➖➖➖➖➖➖ ➖➖
👍9
🌸ಪ್ರಸ್ತುತ - ಪ್ರಚಲಿತ

👉ದೆಹಲಿಯು ಭಾರತದಲ್ಲಿ ಅತಿ ಹೆಚ್ಚು 'ಎಲೆಕ್ಟ್ರಿಕ್ ಬಸ್'ಗಳನ್ನು ಹೊಂದಿರುವ ನಗರವಾಗಿದೆ.

👉 ಬ್ರಿಟನ್ ಪ್ರಧಾನಿ 'ರಿಶಿ ಸುನಕ್' ಅವರು ಫೆಬ್ರವರಿ 19 ರಿಂದ ಅನ್ವಯವಾಗುವಂತೆ
ಶಾಲಾ ತರಗತಿಗಳಲ್ಲಿ ಮೊಬೈಲ್ ಫೋನ್ ಬಳಕೆ ಮಾಡುವುದನ್ನು ನಿಷೇಧಿಸಿದ್ದಾರೆ.

👉ಕರ್ನಾಟಕದ ಮೊದಲ ಮತ್ತು ದೇಶದಲ್ಲೇ ಅತಿದೊಡ್ಡ ಚಿರತೆ ಸಫಾರಿ (Leopard Safari)ಬೆಂಗಳೂರಿನ (Bengaluru)ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ (Bannerghatta Biological Park) ಶೀಘ್ರದಲ್ಲೇ ಆರಂಭವಾಗಲಿದೆ.

👉ಮಂಗಳೂರು ವಿಶ್ವವಿದ್ಯಾನಿಲಯವು ಪ್ರತಿಷ್ಠಿತ ಪ್ರಧಾನಮಂತ್ರಿ “ಉಚ್ಚತರ ಶಿಕ್ಷಾ ಅಭಿಯಾನ’ ಯೋಜನೆಯಲ್ಲಿ ಆಯ್ಕೆಯಾಗಿದೆ. ವಿಶ್ವವಿದ್ಯಾನಿಲಯದ ಅಭಿವೃದ್ಧಿಯ ಬಲವರ್ಧನೆಗೆ 20 ಕೋ.ರೂ. ಅನುದಾನ ಲಭ್ಯವಾಗಿದೆ
--> ಅಭಿಯಾನದ ಯೋಜನೆಯನ್ನು ಇಂದು ಪ್ರಧಾನಿ ಮೋದಿ ಅವರು ಆನ್‌ಲೈನ್‌ ಮೂಲಕ ಉದ್ಘಾಟಿಸಲಿದ್ದಾರೆ

👉ಪಂಜಾಬ್ ರಾಜ್ಯ ಚುನಾವಣಾ ಆಯೋಗವು ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ 'ಶುಭ್‌ಮನ್ ಗಿಲ್' ಅವರನ್ನು ಪಂಜಾಬ್‌ನ ರಾಜ್ಯ ಚುನಾವಣಾ ಐಕಾನ್ (State Icon) ಆಗಿ ಆಯ್ಕೆ ಮಾಡಿದೆ.
--> ಈ ಹಿಂದೆ,ಜನಪ್ರಿಯ ಪಂಜಾಬಿ ಗಾಯಕ 'ತಾರ್ಸೆಮ್ ಜಸ್ಸರ್' ಅವರನ್ನು ‘ರಾಜ್ಯ ಚುನಾವಣಾ ಐಕಾನ್’ ಆಗಿ ಆಯ್ಕೆ ಮಾಡಲಾಗಿತ್ತು.
👍6🤔1
"ಕನ್ನಡ ಅಕ್ಷರಗಳ ಉತ್ಪತ್ತಿ ಕುರಿತು ಸಂಕ್ಷಿಪ್ತ ಮಾಹಿತಿ"
👇👇👇👇👇👇👇👇
1)ಕ ವರ್ಗ ಮತ್ತು
ಅ,ಆ,ಹ,ಅಃ=}ಕಂಠ್ಯ
2)ಚ ವರ್ಗ ಮತ್ತು ಇ,ಈ,ಯ,ಶ=}ತಾಲವ್ಯ
3)ಟ ವರ್ಗ ಮತ್ತು
ಋ,ರ,ಷ=}ಮೂರ್ಧನ್ಯ
4)ತ ವರ್ಗ ಮತ್ತು
ಲ,ಸ =}ದಂತ್ಯ
5)ಪ ವರ್ಗ ಮತ್ತು ಉ,ಊ=}ಓಷ್ಠ್ಯ
------------------------------
1)ಕಂಠತಾಲ=}ಎ,ಏ,ಐ
2)ಕಂಠ್ಯೋಷ್ಠ್ಯ=}ಒ,ಓ,ಔ
3)ದಂತೋಷ್ಠ್ಯ=}ವ
4)ಕಂಠನಾಸಿಕ=}ಅಂ
5)ಅನುನಾಸಿಕ=}ಙ,ಞ,ಣ,ನ,ಮ
👍6