kpsc_study_group📚📖
14.2K subscribers
2.25K photos
48 videos
90 files
460 links
ಪ್ರತಿದಿನಪ್ರಚಲಿತ ವಿದ್ಯಮಾನಗಳನ್ನು ನಮ್ಮ ಟೆಲಿಗ್ರಾಂ ಚಾನೆಲ್ ನಲ್ಲಿ ಕಳಿಸಲಾಗುವುದು🎈🎈#kpsc #psi #sda #fda
Download Telegram
ಪಾಂಗ್ ಅಣೆಕಟ್ಟು:

✅ಸ್ಥಳ: ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆ.
✅ಇದನ್ನು ಬಿಯಾಸ್ ನದಿಯ ಮೇಲೆ ನಿರ್ಮಿಸಲಾಗಿದೆ.
✅ಪಾಂಗ್ ಅಣೆಕಟ್ಟು ಸರೋವರವನ್ನು ಜಲವಿದ್ಯುತ್ ಉತ್ಪಾದಿಸಲು ಮತ್ತು ನೀರಾವರಿ ಉದ್ದೇಶಗಳಿಗಾಗಿ ನಿರ್ಮಿಸಲಾಗಿದೆ.
✅ಇದನ್ನು 1975 ರಲ್ಲಿ ನಿರ್ಮಿಸಲಾಯಿತು.
✅ಅಣೆಕಟ್ಟು ಶಿವಲಿಕರ ತಪ್ಪಲನ್ನು ಆಧರಿಸಿದೆ.
✅ಪಾಂಗ್ ಅಣೆಕಟ್ಟು ಭಾರತದಲ್ಲಿ ಅತಿ ಎತ್ತರದ ಭೂಮಿ ತುಂಬುವ ಅಣೆಕಟ್ಟು.
✅ಇದನ್ನು ಬಿಯಾಸ್ ಅಣೆಕಟ್ಟು, ಮಹಾರಾಣಾ ಪ್ರತಾಪ್ ಸಾಗರ್ ಮತ್ತು ಪಾಂಗ್ ಜಲಾಶಯ ಎಂದೂ ಕರೆಯುತ್ತಾರೆ.
✅ಈ ಪ್ರದೇಶವು ಶ್ರೀಮಂತ ವನ್ಯಜೀವಿಗಳ ಹೆಗ್ಗಳಿಕೆಯನ್ನು ಹೊಂದಿದೆ ಮತ್ತು ವಾಣಿಜ್ಯಿಕವಾಗಿ ಕಾರ್ಯಸಾಧ್ಯವಾದ ಮೀನುಗಳ ಸಂತಾನೋತ್ಪತ್ತಿ ಕೇಂದ್ರವಾಗಿದೆ.
✅ಜಲಾಶಯವು ಹೆಚ್ಚಿನ ಸಂಖ್ಯೆಯ ಪಕ್ಷಿಗಳಿಗೆ ನೆಲೆಯಾಗಿದೆ ಮತ್ತು ಆದ್ದರಿಂದ ಇದನ್ನು ಪಕ್ಷಿಧಾಮವಾಗಿ ಪರಿವರ್ತಿಸಲಾಗಿದೆ.
✅ಪಾಂಗ್ ಅಣೆಕಟ್ಟು ಸರೋವರವನ್ನು 2002 ರಲ್ಲಿ ರಾಮ್ಸರ್ ಮಾನದಂಡ 5 ಮತ್ತು 8 ರ ಅಡಿಯಲ್ಲಿ ರಾಮ್ಸರ್ ಸೈಟ್ ಎಂದು ಗೊತ್ತುಪಡಿಸಲಾಯಿತು.
✅ಇಂಡೋ-ಗಂಗಾ ಬಯಲು ಪ್ರದೇಶದ ಉತ್ತರದ ಅಂಚಿನಲ್ಲಿರುವ ಹಿಮಾಲಯದ ಕೆಳಮಟ್ಟದ ತಪ್ಪಲಿನಲ್ಲಿರುವ ಕಡಿದಾದ ಧೌಲಾಧರ್ ಪರ್ವತ ಶ್ರೇಣಿಯಿಂದ ಜಲಾಶಯವು ಸುತ್ತುವರಿದಿದೆ.
👍6
Thank you so much for your support 🙂LOL team 🙏🙏😇. It's a special offer for today. Hurry up and join us🥳🥳. And keep supporting us 😇🤗
📕ಈ ದಿನದ ಪ್ರಚಲಿತ

👉ಟಾಟಾ ಸ್ಟೀಲ್ ಚೆಸ್ ಟೂರ್ನಮೆಂಟ್ ನಲ್ಲಿ ವಿಶ್ವ ಚಾಂಪಿಯನ್ ಡಿಂಗ್ ಲಿರೆನ್ ಸೋಲಿಸಿ ಭಾರತದ ನಂ.1 ʻಗ್ರ್ಯಾಂಡ್ ಮಾಸ್ಟರ್ʼ ಆದ ಆರ್. ಪ್ರಗ್ನಾನಂದ

👉ಈ ವರ್ಷದ ''ಗ್ಲೋಬಲ್ ಸೈನ್ಸ್ ಫೆಸ್ಟಿವಲ್"ಅನ್ನು ಕೇರಳದ ತಿರುವನಂತಪುರ ನಲ್ಲಿ ಆಯೋಜಿಸಲಾಗಿದೆ.

👉ಭಾರತದಲ್ಲಿ ಪ್ರಥಮ ಬಾರಿಗೆ ಸೋಲಾರ್ ಬೋಟ್(Solar Boat) ಮೂಲಕ ಸರಯು ಯಾತ್ರೆ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ. ಸರಯೂ ನದಿ(Saryu River)ಯಲ್ಲಿ ಸೌರ ಶಕ್ತಿಯ ಇ-ಬೋಟ್ ಅನ್ನು ಪ್ರಾರಂಭಿಸಲಾಗಿದೆ.

👉ಗ್ಲೋಬಲ್ ಫೈರ್ ಪವರ್ (Global Firepower)ಬಿಡುಗಡೆ ಮಾಡಿರುವ 2024ರ ಸಾಲಿನ ಪಟ್ಟಿಯ ಪ್ರಕಾರ, ಅಮೆರಿಕ ಜಗತ್ತಿನ ಅತ್ಯಂತ ಶಕ್ತಿಶಾಲಿ ಸೇನೆಯನ್ನು ಹೊಂದಿದೆ
ನಂತರ ಸ್ಥಾನದಲ್ಲಿRussia,China,India
South Korea.
--> ಜಗತ್ತಿನ ಟಾಪ್ 10 ದುರ್ಬಲ ಸೇನೆಗಳು
ಭೂತಾನ್ ,ಮೊಲ್ಡೊವಾ ,ಸುರಿನಾಮ್ ,ಸೊಮಾಲಿಯಾ ,ಬೆನಿನ್ ,ಲೈಬೀರಿಯಾ,ಬೆಲೀಜ್ ,ಸಿಯೆರಾ ಲಿಯೋನ್ ,ಮಧ್ಯ ಆಫ್ರಿಕಾ ಗಣರಾಜ್ಯ ,ಐಸ್‌ಲ್ಯಾಂಡ್

👉ಅಂತರಾಷ್ಟ್ರೀಯ ವಿಜ್ಞಾನ ಉತ್ಸವ.

ಭಾರತ ಅಂತರಾಷ್ಟ್ರೀಯ ವಿಜ್ಞಾನ ಉತ್ಸವ (IISF)-2023 ಜನವರಿ 17, 2024 ರಂದು ಹರಿಯಾಣದ ಫರಿದಾಬಾದ್‌ನಲ್ಲಿ ಪ್ರಾರಂಭವಾಗಲಿದೆ.
👉IISF 2023 ರ ಕೇಂದ್ರ ವಿಷಯ :-
“ಅಮೃತ್ ಕಾಲ್‌ನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಾರ್ವಜನಿಕ ಸಂಪರ್ಕ"
--> ಇದು 9ನೇ ಆವೃತ್ತಿಯಾಗಿದೆ.

👉ಗಣರಾಜ್ಯೋತ್ಸವದ ಹಿನ್ನೆಲೆ ಯಾವುದೇ ರೀತಿಯ ಭಯೋತ್ಪಾದಕ ಚಟುವಟಿಕೆಗಳು ನಡೆಯದಂತೆ ತಡೆಯಲು ಗಡಿ ಭದ್ರತಾ ಪಡೆ (ಬಿಎಸ್‌ಎಫ್)''ಆಪರೇಷನ್ ಸರ್ದ್ ಹವಾ'' ಎಂಬ ಕಾರ್ಯಾಚರಣೆ ಆರಂಭಿಸಿದೆ.
--> ಪಾಕಿಸ್ತಾನದೊಂದಿಗೆ ಗಡಿ ಹಂಚಿಕೊಂಡಿರುವ ಜಮ್ಮು ಮತ್ತು ಕಾಶ್ಮೀರ,ಪಂಜಾಬ್, ಗುಜರಾತ್ ಮತ್ತು ರಾಜಸ್ಥಾನದಲ್ಲಿ ತೀವ್ರ ಎಚ್ಚರಿಕೆ ವಹಿಸಲಾಗಿದೆ.
--> ಭಾರತ ಮತ್ತು ಪಾಕಿಸ್ತಾನವನ್ನು ವಿಭಜಿಸುವುದು"ರಾಡ್‌ಕ್ಲಿಫ್ ರೇಖೆ"
👍12🔥1
📚ಈ ದಿನದ ಪ್ರಚಲಿತ

👉ಹಾಲು ಉತ್ಪಾದನೆಯಲ್ಲಿ ಭಾರತ ಮೊದಲ ಸ್ಥಾನ...

ಭಾರತ ಸರ್ಕಾರದ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯ ವರದಿಯ ಪ್ರಕಾರ ,ಎಲ್ಲಾ ರೀತಿಯ ಜಾನುವಾರುಗಳ ಹಾಲು ಉತ್ಪಾದನೆಯಲ್ಲಿ ಭಾರತವು ವಿಶ್ವದಲ್ಲೇ ಅಗ್ರಸ್ಥಾನದಲ್ಲಿದೆ.
--> ಜಗತ್ತಿನಲ್ಲಿ ಹಾಲಿನ ಸರಾಸರಿ ಬಳಕೆಯು ಪ್ರಸ್ತುತ ಪ್ರತಿ ವ್ಯಕ್ತಿಗೆ 459 ಗ್ರಾಂ ಇದೆ.
--> ರಾಷ್ಟ್ರೀಯ ಗೋಕುಲ್ ಮಿಷನ್ ಯೋಜನೆಯನ್ನು ಡಿಸೆಂಬರ್ 2014 ರಲ್ಲಿ ಪ್ರಾರಂಭಿಸಲಾಯಿತು. ಇದರ ಉದ್ದೇಶವು ಸ್ಥಳೀಯ ಜಾನುವಾರು ತಳಿಗಳನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸುವುದು ಮತ್ತು ಸಂರಕ್ಷಿಸುವುದು
--> ವಿಶ್ವದ ಒಟ್ಟು ಹಾಲು ಉತ್ಪಾದನೆಯಲ್ಲಿ ಭಾರತವು ಶೇಕಡಾ 24 ರಷ್ಟು ಕೊಡುಗೆ ನೀಡುತ್ತಿದೆ

👉ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ

ವಿವಿಧ ಕ್ಷೇತ್ರಗಳಲ್ಲಿ ಅಧಮ್ಯ ಸಾಧನೆಗೈದ 19 ಮಕ್ಕಳಿಗೆ ಸೋಮವಾರ (ಜ.22) ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ .

ಕೇಂದ್ರಾಡಳಿತ ಪ್ರದೇಶ ಮತ್ತು 18 ರಾಜ್ಯಗಳ ಒಟ್ಟು 9 ಬಾಲಕರು ಹಾಗೂ 10 ಬಾಲಕಿಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ 2024 ಅನ್ನು ಆರು ವಿಭಾಗಗಳಲ್ಲಿ ನೀಡಲಾಗುತ್ತಿದೆ. ಕಲೆ ಮತ್ತು ಸಂಸ್ಕೃತಿ (7), ಶೌರ್ಯ (1) ವಿಜ್ಞಾನ ಮತ್ತು ತಂತ್ರಜ್ಞಾನ (1), ಸಾಮಾಜಿಕ ಸೇವೆ (4) ಕ್ರೀಡೆ (5) ಹಾಗೂ ಆವಿಷ್ಕಾರ ಕ್ಷೇತ್ರದಲ್ಲಿ ಒಬ್ಬರಿಗೆ ಪ್ರಶಸ್ತಿ ನೀಡಲಾಗುತ್ತಿದೆ.

5 ರಿಂದ 18 ವರ್ಷದೊಳಗಿನ ಮಕ್ಕಳ ಸಾಧನೆಯನ್ನು ಗುರುತಿಸಿ ಗೌರವಿಸುವುದೇ ಈ ಪ್ರಶಸ್ತಿಯ ಮುಖ್ಯ ಉದ್ದೇಶವಾಗಿದೆ. ಪ್ರಶಸ್ತಿಯು ಪದಕ ಮತ್ತು ಪ್ರಮಾಣ ಪತ್ರವನ್ನು ಒಳಗೊಂಡಿರಲಿದೆ.

ಕರ್ನಾಟಕದ ಚೆಸ್ ಮಾಸ್ಟರ್‌ ಚಾರ್ವಿ ಅನಿಲ್‌ಕುಮಾರ್ ಅವರು ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ್ 2024 ಗೆ ಆಯ್ಕೆಯಾಗಿದ್ದಾರೆ. ಒಂಬತ್ತು ವರ್ಷದ ಚಾರ್ವಿ 2022 ರಲ್ಲಿ ಜಾರ್ಜಿಯಾದಲ್ಲಿ ನಡೆದ ವಿಶ್ವ ಕೆಡೆಟ್ಸ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ 8 ವರ್ಷದೊಳಗಿನವರ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಆಗಿದ್ದರು.
👍11
ಇಂಪಾರ್ಟೆಂಟ್ ನೋಟ್ ಮಾಡಿಕೊಳ್ಳಿ
✴ವಚನಕಾರರ ಹೆಸರು ಮತ್ತು ಅಂಕಿತನಾಮ✴
✍️📚📚📚🌹🌹🌹🌹🌹🌹🔰
🌿ಜೇಡರದಾಸಿಮಯ್ಯ-ರಾಮನಾಥ

🌿ಅಲ್ಲಮಪ್ರಭು-ಗುಹೇಶ್ವರ

🌿ಅಕ್ಕಮಹಾದೇವಿ-
ಚನ್ನಮಲ್ಲಿಕಾರ್ಜುನ

🌿ಬಸವಣ್ಣ-ಕೂಡಲ ಸಂಗಮದೇವ

🌿ಮುಕ್ತಾಯಕ್ಕ- ಅಜಗಣ್ಣ

🌿ಚೆನ್ನಬಸವಣ್ಣಕೂಡಲ ಚೆನ್ನಸಂಗಯ್ಯ

🌿ಅಂಬಿಗರ ಚೌಡಯ್ಯ-ಅಂಬಿಗರ ಚೌಡಯ್ಯ

🌿ಮಡಿವಾಳ ಮಾಚಯ್ಯ-ಕಲಿದೇವರದೇವ

🌿ಗಂಗಾಂಬಿಕೆ-ಗಂಗಾಪ್ರಿಯ ಕೂಡಲ ಸಂಗಮದೇವ

🌿ನೀಲಾಂಬಿಕೆ/ನೀಲಲೋಚನೆಸಂಗಯ್ಯ

🌿ಆದಯ್ಯಸೌರಾಷ್ಟ್ರ ಸೋಮೇಶ್ವರ

🌿ಡೋಹಾರ ಕಕ್ಕಯ್ಯ-
ಅಭಿನವ ಮಲ್ಲಿಕಾರ್ಜುನ

🌿ಮೋಳಿಗೆ ಮಾರಯ್ಯ-
ನಿಃಕಳಂಕ ಮಲ್ಲಿಕಾರ್ಜುನ

🌿ಸೊನ್ನಲಿಗೆ ಸಿದ್ದರಾಮ-
ಕಪಿಲಸಿದ್ದ ಮಲ್ಲಿಕಾರ್ಜುನ

🌿ಮಧುವಯ್ಯ- ಅರ್ಕೇಶ್ವರಲಿಂಗ

🌿ಅಮುಗೆ ರಾಯಮ್ಮ- ಅಮುಗೇಶ್ವರ

🌿ನೀಲಮ್ಮ-ಬಸವ

🌿ಅಕ್ಕಮ್ಮ- ರಾಮೇಶ್ವರ ಲಿಂಗ

🌿ಸಿದ್ದಬುದ್ದಯ್ಯಗಳ ಪುಣ್ಯಸ್ತ್ರೀ ಕಾಳವ್ವೆ- ಭೀಮೇಶ್ವರಾ

🌿ಸೂಳೆ ಸಂಕವ್ವ- ನಿರ್ಲಜ್ಜೇಶ್ವರ

🌿ಕದಿರ ಕಾಯಕದ ಕಾಳವ್ವೆಗುಮ್ಮೇಶ್ವರ

🌿ರೇಮಮ್ಮೆ- ನಿರಂಗಲಿಂಗ

🌿ಗುಡ್ಡವ್ವೆ- ನಿಂಬೇಶ್ವರಾ

🌿ವೀರಮ್ಮ- ಶಾಂತೇಶ್ವರ ಪ್ರಭುವೇ

🌿ಬಾಚಿಕಾಯಕದ ಕಾಳವ್ವೆಕರ್ಮಹರ - ಕಾಳೇಶ್ವರಾ

🌿ಕೇತಲದೇವಿ - ಕುಂಬೇಶ್ವರ

🌿ರೇಚವ್ವೆ- ನಿಜಶಾಂತೇಶ್ವರ

🌿ಕಾಮಮ್ಮ- ನಿರ್ಭೀತಿ ನಿಜಲಿಂಗದಲ್ಲಿ

🌿ಲಕ್ಷ್ಮಮ್ಮ- ಅಗಜೇಶ್ವರಲಿಂಗವು

🌿ಗಂಗಮ್ಮ- ಗಂಗೇಶ್ವರಲಿಂಗದಲ್ಲಿ

🌿ಮಸಣಮ್ಮ-ನಿಜಗುಣೇಶ್ವರಲಿಂಗದಲ್ಲಿ

🌿ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ- ಉರಿಲಿಂಗ ಪೆದ್ದಿಗಳರಸ

🌿ರೇಕಮ್ಮಶ್ರೀ ಗುರು ಸಿದ್ದೇಶ್ವರ

🌿ಗಜೇಶ ಮಸಣಯ್ಯಗಳ -ಪುಣ್ಯಸ್ತ್ರೀಮಸಣಯ್ಯಪ್ರಿಯ ಗಜೇಶ್ವರಾ

🌿ಕದಿರ ರೆಮ್ಮವ್ವೆ-
ರೆಮ್ಮಿಯೊಡೆಯ ಗುಮ್ಮೇಶ್ವರಾ

🌿ಗೊಗ್ಗವ್ವೆ- ನಾಸ್ತಿನಾಥ

🌿ಅಕ್ಕನಾಗಮ್ಮ-ಸಂಗನ ಬಸವಣ್ಣ

🌿ಸತ್ಯಕ್ಕ- ಶಂಭುಜಕೇಶ್ವರಾ

🌿ಮೋಳಿಗೆ ಮಹಾದೇವಿನಿಃ-
ಕಳಂಕ ಮಲ್ಲಿಕಾರ್ಜುನಲಿಂಗ

🌿ಲಿಂಗಮ್ಮ- ಅಪ್ಪಣ್ಣ ಪ್ರಿಯ ಚನ್ನಬಸವಣ್ಣ

🌿ನಿಜಗುಣ - ಶಿವಯೋಗಿಶಂಭುಲಿಂಗ

🌿ಪುರಂದರದಾಸರು -ಪುರಂದರವಿಠಲ

🌿ಕನಕದಾಸರು -ಕಾಗಿನೆಲೆಯಾದಿಕೇಶವ

🌿ವಿಜಯದಾಸರು-ವಿಜಯ ವಿಠಲ

🌿ವ್ಯಾಸರಾಯರು-ವ್ಯಾಸವಿಠಲ

🌿ಮಹಿಪತಿದಾಸರು-ಗುರು ಮಹಿಪತಿ

🌿ವಾದಿರಾಜರು-ಹಯವದನ

🌿ಶ್ರೀಪಾದರಾಜರು-ರಂಗವಿಠಲ

🌿ಜಗನ್ನಾಥದಾಸರು-ಜಗನ್ನಾಥವಿಠಲ

🌿ನರಹರಿ ತೀರ್ಥರು-ರಘುಪತಿ

🌿ಗೋಪಾಲದಾಸರು-ಗೋಪಾಲ ವಿಠಲ

🌿ಶ್ರೀಜಯಚಾಮರಾಜೇಂದ್ರ -ಒಡೆಯರ್ ಶ್ರೀ ವಿದ್ಯಾ
🌺🌺🌺🌺🌺🌺🌺🌺🌺

ಭಾರತದ ಪ್ರಮುಖ ಮಸೀದಿಗಳು:
👇👇👇👇👇👇👇👇👇👇
ಆದಿನಾ ಮಸೀದಿ - ಮಾಲ್ಡಾ, ಪಶ್ಚಿಮ ಬಂಗಾಳ.

ಚೇರಮನ್ ಜುಮಾ ಮಸೀದಿ - ತ್ರಿಶೂರ್, ಕೇರಳ.

ಆಸ್ಫಿ ಮಸೀದಿ - ಲಕ್ನೋ, ಉತ್ತರ ಪ್ರದೇಶ.

ಮಕ್ಕಾ ಮಸೀದಿ - ಹೈದರಾಬಾದ್, ತೆಲಂಗಾಣ.

ಬಾಬ್ರಿ ಮಸೀದಿ - ಅಯೋಧ್ಯೆ, ಉತ್ತರ ಪ್ರದೇಶ.

ಜಮಾ ಮಸೀದಿ (ಭಾರತದ ಅತಿದೊಡ್ಡ) - ದೆಹಲಿ.

ಮೋತಿ ಮಸೀದಿ - ದೆಹಲಿ.

ಟಿಪ್ಪು ಸುಲ್ತಾನ್ ಮಸೀದಿ - ಕೋಲ್ಕತಾ, ಪಶ್ಚಿಮ ಬಂಗಾಳ.

ತಾಜ್-ಉಲ್-ಮಸಜೀದ್ - ಭೋಪಾಲ್ ಹಜರತ್ಬಾಲ್ ದೇವಾಲಯ - ಶ್ರೀನಗರ, ಜಮ್ಮು ಮತ್ತು ಕಾಶ್ಮಿರ
📚🔰🔰🔰🔰🔰🔰🔰🔰🔰🔰
🌷ಭಾರತದ_ಪ್ರಮುಖ ಸಂಶೋಧನಾ ಸಂಸ್ಥೆಗಳು🌷
👇🏻👇🏻👇🏻👇🏻👇🏻
🌹🌹🌹🌹🌹🌹🌹🌹🌹
🌴ಮಣ್ಣು ಸಂಶೋಧನಾ ಸಂಸ್ಥೆ👉🏻 ಭೊಪಾಲ್.

🌴ದ್ವಿದಳ ಧಾನ್ಯ ಸಂಶೋಧನಾ ಸಂಸ್ಥೆ👉🏻 ಕಾನ್ಪುರ.

🌴ತರಕಾರಿ ಸಂಶೋಧನಾ ಸಂಸ್ಥೆ👉🏻ವಾರಣಾಸಿ.

🌴ಶುಷ್ಕ ತೋಟಗಾರಿಕಾ ಸಂಶೋಧನಾ ಸಂಸ್ಥೆ 👉🏻 ಬಿಕನೆರ್

🌴ಸೆಣಬು ಸಂಶೋಧನಾ ಸಂಸ್ಥೆ 👉🏻ಬ್ಯಾರಕ್ ಪುರ.

🌴ಜೇನು ಸಂಶೋಧನಾ ಸಂಸ್ಥೆ 👉🏻ಪುಣೆ

🌴ಮೆಕ್ಕೆಜೋಳ ಸಂಶೋಧನಾ ಸಂಸ್ಥೆ👉🏻 ಮಂಡ್ಯ.

🌴ನೆಲಗಡಲೆ ಸಂಶೋಧನಾ ಸಂಸ್ಥೆ 👉🏻ಜುನಾಗಡ್

🌴ಖನಿಜ ಸಂಶೋಧನಾ ಸಂಸ್ಥೆ 👉🏻 ಧನಾಬಾದ್

🌴ಮಸಾಲೆ ಪದಾರ್ಥಗಳ ಸಂಶೋಧನಾ ಸಂಸ್ಥೆ 👉🏻 ಕಲ್ಲಿಕೋಟೆ .

🌴ಆಲೂಗಡ್ಡೆ ಸಂಶೋಧನಾ ಸಂಸ್ಥೆ 👉🏻 ಶಿಮ್ಲಾ
👍24
👍10
👍10
ಜನವರಿ 21 :- ದಾಸೋಹ ದಿನ

🌷ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿ ಅವರು ಲಿಂಗೈಕ್ಯರಾದ ದಿನವನ್ನು ಜನವರಿ 21 ದಾಸೋಹ ದಿನವನ್ನಾಗಿ ಆಚರಿಸಲು ಕರ್ನಾಟಕ ಸರ್ಕಾರ 2021ರಂದು ಘೋಷಣೆ ಮಾಡಿತು.

🌷ಶ್ರೀ ಶಿವಕುಮಾರ ಸ್ವಾಮೀಜಿ ಅವರ ಜನ್ಮಸ್ಥಳ 1-4-1907 ರಂದು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಮೀರಾಪುರ ಗ್ರಾಮದಲ್ಲಿ ಜನಿಸಿದರು.

🌷 ಜನವರಿ -21-2019 ನಿಧನ
👍21❤4
Note

🌖ಅತಿ ಹೆಚ್ಚು ರಾಷ್ಟ್ರೀಯ ಹೆದ್ದಾರಿಗಳನ್ನು ಹೊಂದಿದ ಜಿಲ್ಲೆ:
- ಉತ್ತರ ಕನ್ನಡ.

🌖 ಅತಿ ಹೆಚ್ಚು ರಾಜ್ಯ ಹೆದ್ದಾರಿಗಳನ್ನು ಹೊಂದಿದ ಜಿಲ್ಲೆ:
- ಬೆಳಗಾವಿ.

🌖 ಅತಿ ಹೆಚ್ಚು ಜಿಲ್ಲಾ ರಸ್ತೆಗಳ ಹೊಂದಿರುವ ಜಿಲ್ಲೆ:
- ತುಮಕೂರು.
👍19